ಅಲಾಸ್ಟೇರ್ ಕುಕ್
ಅಲಾಸ್ಟೇರ್ ನಾಥನ್ ಕುಕ್, CBE[೧] (ಜನನ: ೨೫ ಡಿಸೆಂಬರ್, ೧೯೮೪) ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಕ್ರಿಕೆಟ್ ಆಟಗಾರ. ಇವರು ದೇಶಿ ಕ್ರಿಕೆಟ್ನಲ್ಲಿ ಎಸ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸುತ್ತಾರೆ. ಮಾಜಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿದ್ದ ಇವರು ಅನೇಕ ದೇಶಿ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ಕುಕ್ ಇಂಗ್ಲೆಂಡ್ ಪರ ಆಡಿದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು.
![]() Alastair Nathan Cook in 2016 | ||||||||||||||||||||||||||||||||||||||||||||||||||||||||||||||||||
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಅಲಾಸ್ಟೇರ್ ನಾಥನ್ ಕುಕ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಗ್ಲೌಸೆಸ್ಟರ್, ಗ್ಲೌಸೆಸ್ಟರ್ಷೈರ್, ಇಂಗ್ಲೆಂಡ್ | ೨೫ ಡಿಸೆಂಬರ್ ೧೯೮೪|||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | Cookie, Chef | |||||||||||||||||||||||||||||||||||||||||||||||||||||||||||||||||
ಎತ್ತರ | 6 ಅಡಿ 2 ಇಂಚು | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಎಡಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಮಧ್ಯಮ | |||||||||||||||||||||||||||||||||||||||||||||||||||||||||||||||||
ಪಾತ್ರ | Opening batsman | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೬೩೦) | ೧ ಮಾರ್ಚ್ ೨೦೦೬ v ಭಾರತ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೧ ಜೂನ್ ೨೦೧೮ v ಪಾಕಿಸ್ತಾನ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೯೬) | ೨೮ ಜೂನ್ ೨೦೦೬ v ಶ್ರೀಲಂಕಾ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೧೬ ಡಿಸೆಂಬರ್ ೨೦೧೪ v ಶ್ರೀಲಂಕಾ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೨೬ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೦೨ | Bedfordshire | |||||||||||||||||||||||||||||||||||||||||||||||||||||||||||||||||
೨೦೦೩ | Essex Cricket Board | |||||||||||||||||||||||||||||||||||||||||||||||||||||||||||||||||
2003-ಪ್ರಸ್ತುತ | Essex (squad no. 26) | |||||||||||||||||||||||||||||||||||||||||||||||||||||||||||||||||
೨೦೦೪-೨೦೦೭ | Marylebone Cricket Club (MCC) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, ೭ ಜೂನ್ ೨೦೧೮ |
ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಇವರು ೫೯ ಟೆಸ್ಟ್ ಮತ್ತು ೬೯ ಏಕದಿನ ಪಂದ್ಯಗಳಲ್ಲಿ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.[೨] ಪ್ರಸ್ತುತವಾಗಿ ಟೆಸ್ಟ್ ಕ್ರಕೆಟಿನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ೧೨೦೦೦ ಟೆಸ್ಟ್ ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ (ಮೊದಲ ಇಂಗ್ಲೆಂಡ್ ಆಟಗಾರ ಮತ್ತು ವಿಶ್ವದ ೬ ನೇ ಆಟಗಾರ). ಇವರು ದಾಖಲೆಯ ೩೨ ಟೆಸ್ಟ್ ಶತಕಗಳು ಗಳಿಸಿದ್ದಾರೆ, ೫೦ ಟೆಸ್ಟ್ ಜಯಗಳಲ್ಲಿ ಭಾಗಿಯಾದ ಮೊದಲ ಇಂಗ್ಲೆಂಡ್ ಆಟಗಾರ. ಎಡಗೈ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಸ್ಲೀಪ್ ಅಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಾರೆ.
ಕುಕ್ ರವರು ಎಸ್ಸೆಕ್ಸ್ ಅಕಾಡೆಮಿ ಪರ ಆಡಿದರು, ೨೦೦೩ರಲ್ಲಿ ಮೊದಲ ಬಾರಿಗೆ ಆಡುವ ಹನೊಂದರಲ್ಲಿ ಸ್ಥಾನ ಪಡೆದರು. ೨೦೦೦ ರಿಂದ ಹಲವಾರು ಯುವಕರ ತಂಡಗಳಲ್ಲಿ ಆಡುತ್ತಿದ್ದ ಇವರು ೨೦೦೬ರಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಇಸಿಬಿ ನೇಷನಲ್ ಅಕಾಡೆಮಿಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾಗ, ಕುಕ್ ರವರನ್ನು ಭಾರತ ಪ್ರವಾಸದಲ್ಲಿದ ಇಂಗ್ಲೆಂಡ್ ತಂಡದ ಪರ ಮಾರ್ಕಸ್ ಟ್ರೆಸ್ಕೋಥಿಕ್ ಬದಲಿಗೆ ಆಡುವ ಅವಕಾಶ ದೊರೆಯಿತು. ೨೧ ವರ್ಷಕ್ಕೆ ಪಾದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದರು. ಮೊದಲ ವರ್ಷದಲ್ಲೇ ೧೦೦೦ ರನ್ ಪೂರೈಸಿದರು ಹಾಗೂ ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದರು.[೩]೨೦೦೯ರ ಆಷಸ್ ಸರಣಿಯನ್ನು ಗೆಲ್ಲಲು ಕುಕ್ ಪ್ರಮುಖ ಪಾತ್ರ ವಹಿಸಿದರು.
೨೯ ಆಗಸ್ಟ್ ೨೦೧೨ ರಂದು ಆಂಡ್ರ್ಯೂ ಸ್ಟ್ರಾಸ್ ಅವರ ನಿವೃತ್ತಿ ಪಡೆದ ನಂತರ ಕುಕ್ ರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಘೋಷಿಸಲಾಯಿತು. ನಾಯಕನಾಗಿ ಇಂಗ್ಲೆಂಡ್ ತಂಡವನ್ನು ೧೯೮೪-೮೫ ನಂತರ ಭಾರತದಲ್ಲಿ ಪ್ರಥಮ ಸರಣಿ ಜಯದತ್ತ ಮುನ್ನಡೆಸಿದರು.[೪] ಈ ಸರಣಿಯಲ್ಲಿ ನಾಯಕನಾಗಿ ನೇಮಕವಾದ ಮೊದಲ ಐದೂ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ನಾಯಕನಾದರು.[೫]೩೦ ಮೇ ೨೦೧೫ರಂದು ಗ್ರಹಾಂ ಗೂಚ್(೮೯೦೦) ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.[೬] ೨೦೧೬ರ ಬಾಂಗ್ಲಾದೇಶ ಪ್ರವಾಸದ ಬಳಿಕ ಟೆಸ್ಟ್ ನಾಯಕನ ಸ್ಥಾನದಿಂದ ಕೆಳಗಿಳಿದರು.[೭][೮][೯][೧೦]
ಉಲ್ಲೇಖಗಳು
ಬದಲಾಯಿಸಿ{{cite news}}
: Unknown parameter |dead-url=
ignored (help)You must specify issue=, startpage=, and date= when using {{London Gazette}}
. Available parameters:
{{London Gazette|issue= |date=|startpage= |endpage=|supp=|city=|accessdate=|nolink=|separator=|ps=}}