ಆಂಡೆಸ್ ಪರ್ವತಗಳು

(ಆಂಡೆಸ್ ಇಂದ ಪುನರ್ನಿರ್ದೇಶಿತ)

ಆಂಡೆಸ್ ಪರ್ವತಗಳು ಭೂಮಿಯ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ.ಭೂಮಿಯ ಅತಿ ಉದ್ದನೆಯ ಪರ್ವತಶ್ರೇಣಿಗಳು ಸಾಗರದಾಳದಲ್ಲಿವೆ. ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾ ಖಂಡದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ. ಈ ಶ್ರೇಣಿಯ ಅಗಲ ೨೦೦ ರಿಂದ ೭೦೦ ಕಿ.ಮೀ. ಮತ್ತು ಸರಾಸರಿ ಎತ್ತರ ೪೦೦೦ ಮೀ. (೧೩೦೦೦ ಅಡಿ). ಆಂಡೆಸ್ ಪರ್ವತಶ್ರೇಣಿಯು ಮುಖ್ಯವಾಗಿ ಎರಡೂ ಮಹಾ ಪರ್ವತಶ್ರೇಣಿಗಳನ್ನೊಳಗೊಂಡಿದೆ. ಕಾರ್ಡಿಲ್ಲೇರಾ ಓರಿಯೆಂಟಲ್ ಮತ್ತು ಕಾರ್ಡಿಲ್ಲೇರಾ ಆಸ್ಸಿಡೆಂಟಲ್ ಎಂದು ಈ ಎರಡು ಶ್ರೇಣಿಗಳ ಹೆಸರು. ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾದ ಏಳು ರಾಷ್ಟ್ರಗಳನ್ನು ಹಾದು ಹೋಗಿವೆ. ಅರ್ಜೆಂಟೀನಾ, ಚಿಲಿ, ಪೆರು, ಬೊಲಿವಿಯ, ಕೊಲೊಂಬಿಯ, ಇಕ್ವೆಡೋರ್ ಮತ್ತು ಟ್ರಿನಿಡಾಡ್ ಈ ಏಳು ದೇಶಗಳು. ಆಂಡೆಸ್ ಪರ್ವತಗಳು ಏಷ್ಯಾದ ಹೊರಗೆ ಜಗತ್ತಿನ ಅತಿ ಎತ್ತರದ ಪರ್ವತಗಳಾಗಿವೆ. ಈ ಶ್ರೇಣಿಯ ಅತ್ಯುನ್ನತ ಶಿಖರವಾದ ಅಕೊನ್‌ಕಾಗುವಾ ೬೯೬೨ ಮೀ. ( ೨೨,೮೪೧ ಅಡಿ) ಎತ್ತರವಾಗಿದೆ. ಎಕ್ವೆಡಾರ್‌ನ ಚಿಂಬೊರಾಜೋ ಜ್ವಾಲಾಮುಖಿಯ ಶಿಖರವು ಭೂಮಿಯ ಕೇಂದ್ರದಿಂದ ಅತಿ ಹೆಚ್ಚು ದೂರದಲ್ಲಿರುವ ನೆಲದ ಮೇಲಿನ ಸ್ಥಾನವಾಗಿದೆ.

ಆಂಡೆಸ್ ಪರ್ವತಗಳು (ಕ್ವೆಚುವಾ)
ಪರ್ವತಶ್ರೇಣಿ
[[Image:| 256px|none
]]
Ceetiesಬೊಗೊಟಾ, ಲಾ ಪಾಜ್, ಸ್ಯಾಂಟಿಯಾಗೋ, ಕ್ವಿಟೋ
Heichest pyntಅಕೊನ್‌ಕಾಗುವಾ
 - locationಅರ್ಜೆಂಟೀನಾ
 - elevation೬,೯೬೨ m (೨೨,೮೪೧ ft)
Lenth೭,೦೦೦ km (೪,೩೫೦ mi)
Width೫೦೦ km (೩೧೧ mi)
Andean culture history (1964) (18168891506)

ಭೂಮೇಲ್ಮೈ ಲಕ್ಷಣಗಳು

ಬದಲಾಯಿಸಿ

ಆಂಡೆಸ್ ಪರ್ವತಗಳನ್ನು ಚಿಲಿ ಮತ್ತು ಅರ್ಜೆಂಟಿನಾಗಳಲ್ಲಿ ಹಬ್ಬಿರುವ ದಕ್ಷಿಣ ಆಂಡೆಸ್, ಚಿಲಿ, ಪೆರು ಮತ್ತು ಬೊಲಿವಿಯ ಗಳಲ್ಲಿ ಹರಡಿರುವ ಮಧ್ಯ ಆಂಡೆಸ್ ಹಾಗೂ ವೆನೆಜುವೇಲಾ ಮತ್ತು ಕೊಲೊಂಬಿಯಗಳಲ್ಲಿ ಹಬ್ಬಿರುವ ಉತ್ತರ ಆಂಡೆಸ್ ಎಂದು ಮೂರು ಭಾಗವಾಗಿ ಭೌಗೋಳಿಕವಾಗಿ ವಿಭಾಗಿಸಲಾಗಿದೆ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಅರೂಬಾ, ಬೊನೈರ್ ಮತ್ತು ಕುರಕಾವ್ ದ್ವೀಪಗಳು ವಾಸ್ತವವಾಗಿ ಸಮುದ್ರದಲ್ಲಿ ಮುಳುಗಿರುವ ಆಂಡೆಸ್ ಪರ್ವತಗಳ ಉತ್ತರದಂಚಿನ ಶಿಖರಗಳಾಗಿವೆ. ಭೂಮಿಯ ಟೆಕ್ಟಾನಿಕ್ ತಟ್ಟೆಗಳ ಸರಿಯುವಿಕೆಯಿಂದ ರೂಪುಗೊಂಡಿರುವ ಆಂಡೆಸ್ ಪರ್ವತಗಳು ಹಲವಾರು ಸಕ್ರಿಯ ಜ್ವಾಲಾಮುಖಿಗಳನ್ನು ಒಳಗೊಂಡಿವೆ.

ಮಧ್ಯ ಆಂಡೆಸ್

ವಾತಾವರಣ

ಬದಲಾಯಿಸಿ

ಆಂಡೆಸ್ ಪರ್ವತಗಳಲ್ಲಿನ ವಾತಾವರಣವು ಸ್ಥಾನ, ಎತ್ತರ ಮತ್ತು ಸಾಗರದಿಂದ ಇರುವ ದೂರದ ಮೇಲೆ ಅವಲಂಬಿತವಾಗಿವೆ. ದಕ್ಷಿಣ ಆಂಡೆಸ್ ಪ್ರಾಂತ್ಯದಲ್ಲಿ ತಂಪಾದ ಹವಾಮಾನವಿದ್ದು ಮಳೆ ಸಾಕಷ್ಟಿದ್ದರೆ ಮಧ್ಯ ಪ್ರಾಂತ್ಯವು ಸಾಮಾನ್ಯವಾಗಿ ಒಣ ಪ್ರದೇಶವಾಗಿದೆ. ಉತ್ತರ ಭಾಗದಲ್ಲಿ ಬಿಸಿ ಹೆಚ್ಚಾಗಿದ್ದು ಮಳೆ ಸಹ ಬಲು ಅಧಿಕವಾಗಿರುತ್ತದೆ. ಈ ಶ್ರೇಣಿಯಲ್ಲಿ ಅತಿ ಕಡಿಮೆ ಅಂತರದಲ್ಲಿಯೇ ಪರಿಸರ ಮತ್ತು ಹವಾಮಾನದಲ್ಲಿ ಭಾರೀ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆ ಹಿಮಾವೃತ ಕೊಟೊಪಾಕ್ಸಿ ಶಿಖರದ ಕೆಲ ಮೈಲಿಗಳ ಅಂತರದಲ್ಲಿಯೇ ಮಳೆಕಾಡುಗಳಿವೆ. ಆಂಡೆಸ್ ಪರ್ವತಗಳ ದಕ್ಷಿಣ ಭಾಗದಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ. ಜೊತೆಗೆ ಈ ಪರ್ವತಪ್ರಾಂತ್ಯದಲ್ಲಿ ಅಟಕಾಮಾ ಮರುಭೂಮಿ ಸಹ ಹುದುಗಿದೆ.

ಸಸ್ಯ ವೈವಿಧ್ಯ

ಬದಲಾಯಿಸಿ

ಆಂಡೆಸ್ ಪರ್ವತಗಳು ಬಲು ವಿಸ್ತಾರವಾದ ಸಸ್ಯ ವೈವಿಧ್ಯವನ್ನು ಹೊಂದಿವೆ. ಸುಮಾರು ೩೦೦೦೦ ಬಗೆಯ ಸಸ್ಯಗಳು ಈ ಪ್ರದೇಶದಲ್ಲಿ ಜೀವಿಸಿವೆ. ಇವುಗಳ ಪೈಕಿ ಸುಮಾರು ೧೫೦೦೦ ತಳಿಗಳು ವಿಶ್ವದ ಬೇರೆಡೆ ಕಾಣವು. ಈ ನಿಟ್ಟಿನಲ್ಲಿ ಆಂಡೆಸ್ ಪರ್ವತಗಳ ಜೀವ ವೈವಿಧ್ಯವು ಜಗತ್ತಿನ ಇನ್ನಾವುದೇ ಸ್ಥಳದಲ್ಲಿರುವುದಕ್ಕಿಂತ ಗಣನೀಯವಾಗಿ ಅಧಿಕವಾಗಿದೆ. ಹಿಂದೆ ಆಂಡೆಸ್ ಪರ್ವತಗಳ ಸಂಪೂರ್ಣ ಉತ್ತರಭಾಗವನ್ನು ಆವರಿಸಿದ್ದ ಮಳೆಕಾಡುಗಳು ಇಂದು ಗಣನೀಯವಾಗಿ ಕುಗ್ಗಿವೆ. ಕೊಲೊಂಬಿಯದಲ್ಲಿ ಅವ್ಯಾಹತವಾಗಿ ನಡೆದಿರುವ ಅರಣ್ಯನಾಶ ಇದಕ್ಕೆ ಕಾರಣ. ಮಲೇರಿಯಾ ರೋಗಕ್ಕೆ ಶಮನವಾದ ಕ್ವಿನೈನ್‌ ಔಷಧಿಯ ಮೂಲವಾದ ಸಿಂಖೋನಾ ಮರಗಳು ಆಂಡೆಸ್ ಪರ್ವತಗಳ ಕೊಡುಗೆ. ಇದಲ್ಲದೆ ತಂಬಾಕು ಗಿಡ ಮತ್ತು ಆಲೂಗಡ್ಡೆ ಸಹ ಆಂಡೆಸ್ ಪರ್ವತಗಳಿಂದ ಜಗತ್ತಿನ ಬೇರೆ ಸ್ಥಳಗಳಿಗೆ ರವಾನೆಯಾದವು.

ಪ್ರಾಣಿ ಸಂಕುಲ

ಬದಲಾಯಿಸಿ

320|right|thumb|ಆಂಡೀಸ್ ಪರ್ವತಶ್ರೇಣಿ

ಆಂಡೆಸ್‌ನ ಕಾಡುಗಳಲ್ಲಿ ಕಾಣಬರುವ ಕಾಕ್-ಆಫ್-ದ-ರಾಕ್ ಹಕ್ಕಿ

ಆಂಡೆಸ್ ಪರ್ವತ ಪ್ರದೇಶದಲ್ಲಿ ಅಪಾರ ಪ್ರಾಣಿ ವೈವಿಧ್ಯ ಕಾಣಬರುತ್ತದೆ. ಸುಮಾರು ೬೦೦ ತಳಿಗಳ ಸಸ್ತನಿಗಳು, ೧೭೦೦ ಜಾತಿಯ ಹಕ್ಕಿಗಳು ಮತ್ತು ೬೦೦ ಬಗೆಯ ಉರಗಗಳು ಇಲ್ಲಿ ನೆಲೆಸಿವೆ. ಜೊತೆಗೆ ೪೦೦ ತಳಿಗಳ ಮೀನುಗಳಿಗೆ ಸಹ ಆಂಡೆಸ್ ಪರ್ವತಗಳು ಆಶ್ರಯ ಒದಗಿಸಿವೆ. ಲಾಮಾಗಳು ಆಂಡೆಸ್ ಪರ್ವತ ಪ್ರಾಂತ್ಯದಲ್ಲಿ ಮಾತ್ರ ಕಾಣುವ ಪ್ರಾಣಿ. ಇವನ್ನು ಇಲ್ಲಿನ ಜನರು ಪಳಗಿಸಿ ಭಾರ ಹೊರಲು ಬಳಸುತ್ತಾರೆ. ಜೊತೆಗೆ ಇವುಗಳ ತುಪ್ಪಳ ಮತ್ತು ಮಾಂಸ ಸಹ ಮಾನವನಿಗೆ ವಾಣಿಜ್ಯವಾಗಿ ಲಾಭದಾಯಕವಾಗಿವೆ. ಭೂಮಿಯ ಪಶ್ಚಿಮ ಗೋಲಾರ್ಧದ ಅತಿ ದೊಡ್ಡ ಪಕ್ಷಿಯಾದ ಆಂಡೀಯನ್ ಕಾಂಡರ್ ಆಂಡೆಸ್ ಪರ್ವತಗಳಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.

ಬಾಹ್ಯ ಸಂಪರ್ಕಕೊಂಡಿಗಳು

ಬದಲಾಯಿಸಿ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಮುಖ್ಯ ಪುಟವಿಶೇಷ:Searchಸಹಾಯ:ಲಿಪ್ಯಂತರದ.ರಾ.ಬೇಂದ್ರೆದುಶ್ಯಾಸನವಿಶ್ವಾಮಿತ್ರಕನ್ನಡಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಿವರಾಮ ಕಾರಂತಗಾದೆಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದುರ್ಯೋಧನಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಅಕ್ಷರಮಾಲೆಜಿ.ಎಸ್.ಶಿವರುದ್ರಪ್ಪವಿನಾಯಕ ಕೃಷ್ಣ ಗೋಕಾಕಚಂದ್ರಶೇಖರ ಕಂಬಾರಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಸಂವಿಧಾನಯು.ಆರ್.ಅನಂತಮೂರ್ತಿಕರ್ನಾಟಕಹುಲ್ಲಹಳ್ಳಿಪೂರ್ಣಚಂದ್ರ ತೇಜಸ್ವಿಮಹಾತ್ಮ ಗಾಂಧಿಅಕ್ಕಮಹಾದೇವಿಗಿರೀಶ್ ಕಾರ್ನಾಡ್ವಿಜಯನಗರ ಸಾಮ್ರಾಜ್ಯಅಂಗವಿಕಲತೆಹಂಪೆಎ.ಪಿ.ಜೆ.ಅಬ್ದುಲ್ ಕಲಾಂಫ.ಗು.ಹಳಕಟ್ಟಿಗೋವಿಂದ ಪೈಸ್ವಾಮಿ ವಿವೇಕಾನಂದಕನ್ನಡ ಸಂಧಿ