ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್

ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್‌ರವರು ೧೮೧೮ರ ಏಪ್ರಿಲ್ ೮ರಂದು ಗೀಸೆನ್‌ನಲ್ಲಿ ಜನಿಸಿದರು. ಕಲ್ಲಿದ್ದಲು ಡಾಂಬರಿನಲ್ಲಿ (coal tar) ಅನಿಲೀನ್‌ನ (aniline) ಅಸ್ತಿತ್ವದ ಸಂಶೋಧನೆ ಹೋಫ್‌ಮನ್‌ರವರ ಮೊದಲ ಸಂಶೋಧನೆಯಾಗಿತ್ತು. ೧೮೫೦ರ ಸುಮಾರಿಗೆ ಹೋಫ್‌ಮನ್‌ರವರು ‘ಅಮೀನ್’ಗಳ (amines) ಗುಣಸ್ವಭಾವಗಳನ್ನೂ, ಅವುಗಳ ವರ್ತನೆಯನ್ನೂ ಕಂಡುಹಿಡಿದರು. ನಂತರ ‘ಆಲ್ಕೈಲ್ ಅಮೀನ್’ಗಳನ್ನು (alkyl amines) ಕೂಡ ತಯಾರಿಸಿದರು. ಡೈಅಮೀನ್‌ಗಳು ಮತ್ತು ಆಲ್ಕೈಲ್ ಹಾಲೈಡ್‌ಗಳ ಸಂಯೋಜನೆಯಿಂದ ಅನೇಕ ಸಂಕೀರ್ಣವಾದ ಅಮೀನ್‌ಗಳನ್ನು ಹೋಫ್‌ಮನ್‌ರವರು ತಯಾರಿಸಿದರು. ‘ಫಾರ್ಮಲ್ಡಿಹೈಡ್’ನ (formaldehyde or methanol) ಆಂತರಿಕ ರಚನೆ ಮತ್ತು ಗುಣಸ್ವಭಾವಗಳನ್ನು ಕಂಡುಹಿಡಿದವರಲ್ಲಿ ಹೋಫ್‌ಮನ್‌ರವರು ಮೊದಲಿಗರಾಗಿದ್ದಾರೆ.[೧]ಹಾಫ್‌ಮನ್‌ರವರು ೧೮೫೮ರಲ್ಲಿ ‘ಫುಷೈನ್’ ಅಥವಾ ಮೆಜೆಂಟಾ ರಂಗನ್ನು (fuchsine or magenta dye) ತಯಾರಿಸಿದರು.[೨] ನಂತರ ಇತರ ಅನೇಕ ರಂಗುಗಳನ್ನು ತಯಾರಿಸಿದ ಹೋಫ್‌ಮನ್‌ರವರು ೧೮೬೩ರಲ್ಲಿ ಅವುಗಳ ಪೇಟೆಂಟ್ ಗಳಿಸಿದರು. ಹೋಫ್‌ಮನ್‌ರವರು ೧೮೯೨ರ ಮೇ ೨ರಂದು ಬರ್ಲಿನ್‌ನಲ್ಲಿ ನಿಧನರಾದರು.

ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್
ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್
ಜನನ
ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್

೧೮೧೮ರ ಏಪ್ರಿಲ್ ೮
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಉಲ್ಲೇಖಗಳು

ಬದಲಾಯಿಸಿ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಗೌತಮ ಬುದ್ಧಕನ್ನಡಶಿವರಾಮ ಕಾರಂತಬೆಂಗಳೂರು ಕೋಟೆಕನ್ನಡ ಅಕ್ಷರಮಾಲೆಮಾಗಡಿಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಜಿ.ಎಸ್.ಶಿವರುದ್ರಪ್ಪಯು.ಆರ್.ಅನಂತಮೂರ್ತಿಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ವಿಜಯನಗರ ಸಾಮ್ರಾಜ್ಯಕರ್ನಾಟಕಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂಬೆಂಗಳೂರುವಚನ ಸಾಹಿತ್ಯಗಿರೀಶ್ ಕಾರ್ನಾಡ್ಮಹಾತ್ಮ ಗಾಂಧಿಹಂಪೆಗೋವಿಂದ ಪೈಫ.ಗು.ಹಳಕಟ್ಟಿಚಿತ್ರ:Kempegowda I.jpgಅಕ್ಕಮಹಾದೇವಿಕನ್ನಡ ಗುಣಿತಾಕ್ಷರಗಳುಛತ್ರಪತಿ ಶಿವಾಜಿ