ಎರಡನೇಯ ಜಸ್ಟಿನ್

ಎರಡನೇಯ ಜಸ್ಟಿನ್ - 565-578ರಲ್ಲಿ ಪೂರ್ವ ರೋಮನ್ ಚಕ್ರಾಧಿಪತ್ಯದ ಚಕ್ರವರ್ತಿಯಾಗಿದ್ದ. ಇವನು 1ನೆಯ ಜಸ್ಟಿನಿಯನನ ಸಹೋದರಿಯ ಮಗ.

ಬದುಕು ಮತ್ತು ಆಳಿಕೆ

ಬದಲಾಯಿಸಿ

ಜಸ್ಟಿನಿಯನನ ರಾಣಿಯಾಗಿದ್ದ ತೀಯೊಡೋರಳ ಸಹೋದರಿಯ ಮಗಳಾದ ಸೋಫಿಯಳನ್ನು ವಿವಾಹವಾಗಿದ್ದ.

ಚಕ್ರವರ್ತಿಗೂ ರಾಣಿಗೂ ಹತ್ತಿರದ ಸಂಬಂಧವಿದ್ದುದರಿಂದ ಅವನು ಉನ್ನತ ಹುದ್ದೆಗೆ ಏರಿ ಅರಮನೆಯ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಜಸ್ಟಿನಿಯನನಿಗೆ ಮಕ್ಕಳಿರಲಿಲ್ಲವಾದ್ದರಿಂದ ಜಸ್ಟಿನನೇ ಉತ್ತರಾಧಿಕಾರಿಯಾಗಿದ್ದ. ಜಸ್ಟಿನಿಯನನ ಮರಣಾನಂತರ ಚಕ್ರವರ್ತಿಯಾದ.

ಅಧಿಕಾರಕ್ಕೆ ಬಂದ ಕೂಡಲೇ ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತಂದು, ಯಶಸ್ವಿ ಸಾಮ್ರಾಟನಾಗುವನೆಂಬ ಭಾವನೆಯನ್ನು ಜನರಲ್ಲಿ ಮೂಡಿಸಿದ. ಜಸ್ಟಿನಿಯನ್ ಮಾಡಿದ್ದ ಸಾಲಗಳನ್ನು ತೀರಿಸಿದುದಲ್ಲದೆ ಪ್ರಜೆಗಳಿಗೆ ಮತೀಯ ಸ್ವಾತಂತ್ರ್ಯವನ್ನು ನೀಡುವುದಾಗಿ ಘೋಷಿಸಿದ. ಅವನೇ ನ್ಯಾಯತೀರ್ಮಾನ ಮಾಡುತ್ತಿದ್ದ. ಅವನ ಅನೇಕ ಸುಧಾರಣೆಗಳಿಂದ ಶ್ರೀಮಂತರಿಗೂ ಪ್ರಾಂತ್ಯಾಧಿಕಾರಿಗಳಿಗೂ ಸ್ವಚ್ಛಂದ ಚಟುವಟಿಕೆಗಳಿಗೆ ತೊಂದರೆಯಾದುದರಿಂದ ಅವರು ಅಸಮಾಧಾನಗೊಂಡರು. ಅವನ ಆಳ್ವಿಕೆಯಲ್ಲಿ ಲೊಂಬಾರ್ಡಿಯನರು ಇಟಲಿಯನ್ನು ಆಕ್ರಮಿಸಿದರು. ಅವರ ಆಕ್ರಮಣವನ್ನು ತೆರವು ಮಾಡುವುದರಲ್ಲಿ ಜಸ್ಟಿನ್ ಯಶಸ್ವಿಯಾಗಲಿಲ್ಲ. 572ರಲ್ಲಿ ಅರ್ಮೇನಿಯದ ಕ್ರೈಸ್ತರ ರಕ್ಷಣೆಗಾಗಿ ಅವನು ತುರ್ಕರನ್ನು ಶಿಕ್ಷಿಸಿದ್ದರಿಂದ ಪರ್ಷಿಯದೊಡನೆ ಯುದ್ಧ ಸಂಭವಿಸಿತು. ಜಸ್ಟಿನನ ಸೈನ್ಯಗಳು ಎರಡು ಯುದ್ಧಗಳಲ್ಲಿ ಪರಾಭವಗೊಂಡವು. ಪರ್ಷಿಯನರ ಆಕ್ರಮಣಕ್ಕೆ ಸಿರಿಯ ಈಡಾಯಿತು. ಪರ್ಷಿಯನರಿಗೆ ವಾರ್ಷಿಕ ಪೊಗದಿಯನ್ನು ಕೊಡಲು ಒಪ್ಪಿ ಜಸ್ಟಿನ್ ಯುದ್ಧವನ್ನು ಕೊನೆಗಾಣಿಸಿದ. ಅನಾರೋಗ್ಯದ ಕಾರಣದಿಂದ ಅವನು ಸಹಾಯಕನೊಬ್ಬನನ್ನು ನೇಮಿಸಿಕೊಳ್ಳಲು ಯೋಚಿಸಿದ. ರಾಣಿಯಾದ ಸೋಫಿಯಳ ಪ್ರೇರಣೆಯ ಮೇರೆಗೆ ದಳಪತಿಯಾದ ಟೈಬೀರಿಯಸನನ್ನು ಸಹಸಾರ್ವಭೌಮನಾಗಿ ನೇಮಕಮಾಡಿದ (574). ಅನಂತರ ತನ್ನ ಮರಣದವರೆಗೆ (578) ವಿಶ್ರಾಂತ ಜೀವನ ಸಾಗಿಸಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುಫ.ಗು.ಹಳಕಟ್ಟಿವಿಶೇಷ:Searchಮುಖ್ಯ ಪುಟಸಹಾಯ:ಲಿಪ್ಯಂತರಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯು.ಆರ್.ಅನಂತಮೂರ್ತಿಬಸವೇಶ್ವರಗೌತಮ ಬುದ್ಧಕನ್ನಡಶಿವರಾಮ ಕಾರಂತಹೊಯ್ಸಳಗಾದೆಭಾರತದ ಸಂವಿಧಾನಹರಿಶ್ಚಂದ್ರಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ವೈದ್ಯರ ದಿನಾಚರಣೆಚಂದ್ರಶೇಖರ ಕಂಬಾರಫ. ಗು. ಹಳಕಟ್ಟಿಕನ್ನಡ ಅಕ್ಷರಮಾಲೆಬಿ. ಆರ್. ಅಂಬೇಡ್ಕರ್ಕೃಷ್ಣದೇವರಾಯಮಹಾತ್ಮ ಗಾಂಧಿಹೊಯ್ಸಳ ವಿಷ್ಣುವರ್ಧನವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಗೋವಿಂದ ಪೈಬೃಹಸ್ಪತಿಬೆಳ್ಳುಳ್ಳಿಕರ್ನಾಟಕಅಕ್ಕಮಹಾದೇವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಛತ್ರಪತಿ ಶಿವಾಜಿಸ್ವಾಮಿ ವಿವೇಕಾನಂದಎ.ಪಿ.ಜೆ.ಅಬ್ದುಲ್ ಕಲಾಂ