ಮಿಲನ ನಾಗರಾಜ್

ಮಿಲನ ನಾಗರಾಜ್ (ಜನನ ೨೫ ಏಪ್ರೀಲ್ ೧೯೮೯) ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.[೧] ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾಗಿದ್ದರು.

ಮಿಲನ ನಾಗರಾಜ್
ಜನನ೨೫-ಏಪ್ರೀಲ್-೧೯೮೯
ಹಾಸನ, ಕರ್ನಾಟಕ, ಭಾರತ
ವೃತ್ತಿ(ಗಳು)ನಟಿ, ಮಾಡೆಲ್
Years active೨೦೧೩ - ಇಂದಿನವರೆಗೆ
ಪೋಷಕ(ರು)ನಾಗರಾಜ್, ಚಂದ್ರಕಲಾ

ಇವರು ೨೫ ಏಪ್ರೀಲ್ ೧೯೮೯ ರಲ್ಲಿ ಹಾಸನದಲ್ಲಿ ಜನಿಸಿದರು.[೨]

ಶಿಕ್ಷಣ

ಬದಲಾಯಿಸಿ

ಅವರು ತನ್ನ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಹಾಸನದಲ್ಲಿಯೇ ತೆಗೆದುಕೊಂಡರು. ಅವರು ಬ್ಯಾಚುಲರ್ ಇನ್ ಕಂಪ್ಯೂಟರ್ ಸಾಯನ್ಸ್. ಬೆಂಗಳೂರಿನ ವಿಕೆಐಟಿ ಕಾಲೇಜಿನಿಂದ ಎಂಜಿನಿಯರಿಂಗ್ ಮಾಡಿದರು. ಬಾಲ್ಯದಿಂದಲೂ ಅವರು ಉತ್ತಮ ಈಜುಗಾರ್ತಿ.[೩]

ಇವರು ೧೨ ನೇ ತರಗತಿಯಲ್ಲಿ ಇರುವಾಗ ಬೋರ್ಡ್ ಪರೀಕ್ಷೆಗೆ ಕೆಲವೇ ತಿಂಗಳುಗಳ ಮೊದಲು ಇವರು ಅಪಘಾತಕ್ಕೀಡಾದರು. ಇವರ ಕಾಲಿನ ಮೂಳೆ ತುಂಬಾ ಕೆಟ್ಟದಾಗಿ ಮುರಿದುಹೋಗಿತ್ತು. ಈ ದುರಂತದಿಂದ ಇವರಿಗೆ ಈಜಲು ಸಾಧ್ಯವಾಗಲಿಲ್ಲ. ನಂತರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಎಂಜಿನಿಯರಿಂಗ್ ಗೆ ಆಯ್ಕೆಯಾದರು. ನಂತರ ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾದರು. ನಂತರ ಅವರು ೨೦೧೩ ರಲ್ಲಿ ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

ಫಿಲ್ಮೊಗ್ರಾಫಿ

ಬದಲಾಯಿಸಿ
ಕೀ
ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷಚಲನಚಿತ್ರಪಾತ್ರಭಾಷೆಟಿಪ್ಪಣಿ
೨೦೧೩ನಮ್ ದುನಿಯಾ ನಮ್ ಸ್ಟೈಲ್ಮಿಲನಕನ್ನಡ
೨೦೧೩ಬೃಂದಾವನಮಧುಕನ್ನಡ
೨೦೧೫ಚಾರ್ಲಿಪೂರ್ವಿಕನ್ನಡ
೨೦೧೭ಅವರುಡೆ ರಾವುಕಲ್ಮೇಘಮಲಯಾಳಂ
೨೦೧೭ಜಾನಿಐಶ್ವರ್ಯಾಕನ್ನಡ
೨೦೨೦ಲವ್ ಮಾಕ್ಟೇಲ್ [೪]ನಿಧಿಕನ್ನಡನಿರ್ಮಾಪಕ
೨೦೨೦ಮತ್ತೆ ಉದ್ಭವಸ್ಪಂದನಕನ್ನಡ
೨೦೨೨ಲವ್ ಮಾಕ್ಟೇಲ್ ೨ನಿಧಿಕನ್ನಡ
೨೦೨೨ವಿಕ್ರಾಂತ್ ರೋಣರೆಣು ರೋಣಕನ್ನಡ

ಉಲ್ಲೇಖಗಳು

ಬದಲಾಯಿಸಿ
  1. "Milana to play NRI in Mr Jani - Times of India". The Times of India (in ಇಂಗ್ಲಿಷ್). Retrieved 1 July 2020.
  2. "All you want to know about #MilanaNagraj". FilmiBeat (in ಇಂಗ್ಲಿಷ್). Retrieved 1 July 2020.
  3. "Milana Nagaraj wanted to be a national level swimmer - Times of India". The Times of India (in ಇಂಗ್ಲಿಷ್). Retrieved 1 July 2020.
  4. "ಲವ್ ಮಾಕ್ಟೇಲ್ ಕಥೆ | Love Mocktail Sandalwood Movie Story, Preview in Kannada - Filmibeat Kannada". FilmiBeat. Retrieved 1 July 2020.
🔥 Top keywords: ಕುವೆಂಪುಫ.ಗು.ಹಳಕಟ್ಟಿವಿಶೇಷ:Searchಮುಖ್ಯ ಪುಟಸಹಾಯ:ಲಿಪ್ಯಂತರಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯು.ಆರ್.ಅನಂತಮೂರ್ತಿಬಸವೇಶ್ವರಗೌತಮ ಬುದ್ಧಕನ್ನಡಶಿವರಾಮ ಕಾರಂತಹೊಯ್ಸಳಗಾದೆಭಾರತದ ಸಂವಿಧಾನಹರಿಶ್ಚಂದ್ರಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ವೈದ್ಯರ ದಿನಾಚರಣೆಚಂದ್ರಶೇಖರ ಕಂಬಾರಫ. ಗು. ಹಳಕಟ್ಟಿಕನ್ನಡ ಅಕ್ಷರಮಾಲೆಬಿ. ಆರ್. ಅಂಬೇಡ್ಕರ್ಕೃಷ್ಣದೇವರಾಯಮಹಾತ್ಮ ಗಾಂಧಿಹೊಯ್ಸಳ ವಿಷ್ಣುವರ್ಧನವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಗೋವಿಂದ ಪೈಬೃಹಸ್ಪತಿಬೆಳ್ಳುಳ್ಳಿಕರ್ನಾಟಕಅಕ್ಕಮಹಾದೇವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಛತ್ರಪತಿ ಶಿವಾಜಿಸ್ವಾಮಿ ವಿವೇಕಾನಂದಎ.ಪಿ.ಜೆ.ಅಬ್ದುಲ್ ಕಲಾಂ