ಸೌರ ಮಾರುತ

ಸೌರ ಮಾರುತವು ಸೂರ್ಯಹೊರ ವಾಯುಮಂಡಲದಿಂದ ಹೊರಚಿಮ್ಮಿದ ಆವಿಷ್ಟ ಕಣಗಳ (ಅಂದರೆ, ಪ್ಲಾಸ್ಮ) ಧಾರೆ. ಸೌರಮಾರುತವು ಬಹುತೇಕವಾಗಿ ಉನ್ನತಶಕ್ತಿ (ಸುಮಾರು ೧ keV) ಎಲೆಕ್ಟ್ರಾನ್ಗಳು ಮತ್ತು ಪ್ರೋಟಾನ್ಗಳಿಂದ ಕೂಡಿರುತ್ತದೆ. ಸೂರ್ಯನ ಪ್ರಭಾವಲಯದಲ್ಲಿನ ಹೆಚ್ಚು ತಾಪಮಾನದ ಕಾರಣದಿಂದ, ಈ ಕಣಗಳು ಸೂರ್ಯನ ಗುರುತ್ವದಿಂದ ತಪ್ಪಿಸಿಕೊಂಡು ಹೊರಚಿಮ್ಮುತ್ತವೆ. ಈ ಕಣಗಳು ಉನ್ನತ ಚಲನ ಶಕ್ತಿಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯು ಇನ್ನೂ ವಿಷದವಾಗಿ ತಿಳಿದುಬಂದಿಲ್ಲ.

ಸೌರಮಾರುತದಲ್ಲಿನ ಪ್ಲಾಸ್ಮ ಸೌರವಿರಾಮವನ್ನು ತಲುಪುತ್ತಿರುವುದು.

ಸೌರಮಂಡಲದಲ್ಲಿನ ಹಲವು ವಿದ್ಯಮಾನಗಳು ನೇರವಾಗಿ ಸೌರಮಾರುತಕ್ಕೆ ಸಂಬಂಧಿಸಿವೆ: ಭೂಮಿಯ ವಿದ್ಯುತ್-ಜಾಲಕ್ಕೆ ಹಾನಿಯುಂಟುಮಾಡಬಲ್ಲ ಭೂಕಾಂತೀಯ ಮಾರುತಗಳು, ಧ್ರುವಾರುಣ ಜ್ಯೋತಿಗಳು, ಮತ್ತು ಸೂರ್ಯನ ವಿರುದ್ಧ ದಿಕ್ಕಿಗೇ ತೋರುವ ಧೂಮಕೇತುವಿನ ಪ್ಲಾಸ್ಮ ಬಾಲ.

ಸೌರಮಾರುತದ ಕಾರಣ, ಪ್ರತಿವರ್ಷ ಸೂರ್ಯವು ತನ್ನ ಒಟ್ಟು ದ್ರವ್ಯರಾಶಿಯ ಸುಮಾರು ೩.೩೩•೧೦೧೩ನೇ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ.[೧].

ಗ್ರಹಗಳ ಮೇಲಿನ ಪರಿಣಾಮ

ಬದಲಾಯಿಸಿ

ಬುಧವು ಸೂರ್ಯನಿಗೆ ಅತಿ ಸಮೀಪದ ಗ್ರಹವಾಗಿದ್ದು, ಸೌರಮಾರುತದಿಂದ ತೀವ್ರ ಧಾಳಿಯನ್ನು ಅನುಭವಿಸುತ್ತದೆ. ತನ್ನ ವಾಯುಮಂಡಲವು ಬಹಳ ವಿರಳವಾಗಿದ್ದು, ಮೇಲ್ಮೈಯು ಸೌರ ವಿಕಿರಣದಲ್ಲಿ ಮಿಂದಿರುತ್ತದೆ.

ಭೂಮಿಗೆ ಸಮೀಪದಲ್ಲಿರುವ ಶುಕ್ರವು ಭೂಮಿಗಿಂತ ೧೦೦ ಪಟ್ಟು ಸಾಂದ್ರವಾದ ವಾಯುಮಂಡಲವನ್ನು ಹೊಂದಿದೆ. ಶುಕ್ರ ಗ್ರಹದಿಂದ ಹೊರಬಂದು ಸುಮಾರು ಭೂಮಿಯ ಕಕ್ಷೆಯವರೆಗೆ ಚಾಚಿರುವ ಧೂಮಕೇತುವಿನಂತಹ ಬಾಲವನ್ನು ಆಧುನಿಕ ಗಗನ ಶೋಧಕಗಳು ಪತ್ತೆಹಚ್ಚಿವೆ.[೨]

ಭೂಮಿಯು ಕಾಂತಕ್ಷೇತ್ರವನ್ನು ಹೊಂದಿರುವ ಕಾರಣ, ಸೌರಮಾರುತದಿಂದ ಸಾಕಷ್ಟು ರಕ್ಷಣೆಯನ್ನು ಪಡೆದಿದೆ. ಸೌರಮಾರತವು ಧ್ರುವಾರುಣ ಜ್ಯೋತಿ ಮತ್ತು ಭೂಕಾಂತೀಯ ಮಾರುತಗಳನ್ನು ಸೃಷ್ಟಿಸುವಷ್ಟು ಶಕ್ತಿಯುತವಾಗಿದ್ದಾಗ ಮಾತ್ರ ನಮ್ಮ ಗಮನಕ್ಕೆ ಬರುತ್ತದೆ.

ಚಂದ್ರನ ಮೇಲೆ ವಾಯುಮಂಡಲ ಅಥವಾ ಕಾಂತಕ್ಷೇತ್ರಗಳು ಇಲ್ಲದಿರುವುದರಿಂದ, ಅದರ ಮೇಲ್ಮೈಯು ಸೌರಮಾರುತದ ಧಾಳಿಯನ್ನು ಅನುಭವಿಸುತ್ತದೆ. ಅಪೋಲೋ ಯಾತ್ರೆಯ ಭಾಗವಾಗಿ, ಸೌರ ಮಾರುತದ ಮಾದರಿಯನ್ನು ಸಂಗ್ರಹಿಸಲು ವಿಶಾಲವಾದ ಅಲ್ಯುಮಿನಂ ಗ್ರಾಹಕಗಳನ್ನು ನಿಯೋಗಿಸಲಾಯಿತು. ಇದಲ್ಲದೆ, ಚಂದ್ರನ ಆವರಣ ಪ್ರಸ್ತರವು ಸೌರಮಾರುತದಿಂದ ಸಂಚಯಿತ ಪರಮಾಣು ಕೋಶಗಳಿಂದ ಕೂಡಿದೆ ಎಂದು ಚಂದ್ರನ ಮಣ್ಣಿನ ಅಧ್ಯಯನದಿಂದ ತಿಳಿದುಬಂದಿತು. ಈ ಮೂಲಧಾತುಗಳು ಭವಿಷ್ಯದಲ್ಲಿ ಚಂದ್ರನ ಮೇಲಿನ ವಸಾಹತುಗಳಿಗೆ ಸಹಾಯಕವಾಗುವವು ಎಂಬ ಕಲ್ಪನೆಗಳಿವೆ.

ಮಂಗಳವು ಬುಧಕ್ಕಿಂದ ದೊಡ್ಡದಾಗಿದ್ದು, ಸೂರ್ಯನಿಗೆ ಬುಧವಿರುವ ನಾಲ್ಕರಷ್ಟು ದೂರದಲ್ಲಿದೆ. ಆದರೂ, ಸೌರಮಾರುತವು ಮಂಗಳ ಗ್ರಹದ ಸುಮಾರು ಮೂರನೇ ಒಂದು ಭಾಗವನ್ನು ತನ್ನೊಂದಿಗೆ ಸೆಳೆದುಕೊಂಡು ಹೋಗಿ, ಭೂಮಿಯ ವಾಯುಮಂಡಲದ ೧೦೦ನೇ ೧ರಷ್ಟು ಮಾತ್ರ ದಪ್ಪವಿರುವ ವಾಯುಮಂಡಲವನ್ನು ಬಿಟ್ಟಿದೆ ಎಂದು ಶಂಕಿಸಲಾಗಿದೆ.

ಹೊರ ಸೀಮೆ

ಬದಲಾಯಿಸಿ

ಸೌರಮಾರುತವು ಅಂತರನಾಕ್ಷತ್ರಿಕ ಮಾಧ್ಯಮದಲ್ಲಿ (ಬ್ರಹ್ಮಾಂಡವನ್ನು ವ್ಯಾಪಿಸುವ ವಿರಳವಾದ ಜಲಜನಕ ಮತ್ತು ಹೀಲಿಯಂ ಅನಿಲಗಳು) ಒಂದು "ಗುಳ್ಳೆ"ಯನ್ನು ಸೃಷ್ಟಿಸುತ್ತದೆ. ಸೌರಮಾರುತದ ಶಕ್ತಿಯು ಸೂರ್ಯನಿಂದ ದೂರ ಸರಿದಂತೆ ಕಡಿಮೆಯಾಗುತ್ತದೆ. ಸೌರಮಾರುತವು ಅಂತರನಾಕ್ಷತ್ರಿಕ ಮಾಧ್ಯಮವನ್ನು ಹಿಂದೆ ತಳ್ಳಲಾಗದಷ್ಟು ದುರ್ಬಲವಾಗುವ ಬಿಂದುವಿಗೆ ಸೌರವಿರಾಮ ಎಂದು ಹೆಸರು. ಈ ಬಿಂದುವನ್ನು ಹಲವೊಮ್ಮೆ ಸೌರಮಂಡಲದ ಹೊರ "ಗಡಿ" ಎಂದೂ ಪರಿಗಣಿಸಲಾಗುತ್ತದೆ. ಸೂರ್ಯನಿಂದ ಸೌರವಿರಾಮದವರೆಗಿನ ದೂರವು ನಿಖರವಾಗಿ ತಿಳಿದುಬಂದಿಲ್ಲವಾದರೂ, ಇದು ಪ್ಲುಟೊದ ಕಕ್ಷೆಯಿಂದಾಚೆ ಇದೆಯೆಂದು ತಿಳಿದಿದೆ. ೨೦೦೮ರಲ್ಲಿ ಉಡಾಯಿಸಲಾಗುವ ಅಂತರನಾಕ್ಷತ್ರಿಕ ಸೀಮಾನ್ವೇಷಕ (IBEX) ಯಾತ್ರೆಯು ಒದಗಿಸುವ ಮಾಹಿತಿಯಿಂದ ಸೌರವಿರಾಮದ ಬಗ್ಗೆ ಹೆಚ್ಚಿನ ತಿಳಿವಳಿಕೆಪಡೆದುಕೊಳ್ಳುವ ಆಸೆಯನ್ನು ವಿಜ್ಞಾನಿಗಳು ಇಟ್ಟುಕೊಂಡಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. Carroll, B. and Ostlie, D. Modern Astrophysics - pg. 409 .
  2. Grünwaldt H; et al. (1997). "Venus tail ray observation near Earth". Geophysical Research Letters. 24 (10): 163–1166. {{cite journal}}: Explicit use of et al. in: |author= (help)


ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Sun|trek website ಸೂರ್ಯ ಮತ್ತು ಭೂಮಿಯ ಮೇಲೆ ಅದರ ಪರಿಣಾಮ - ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ಸಾಧನ
🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರವಿಶೇಷ:Searchಮುಖ್ಯ ಪುಟಗೌತಮ ಬುದ್ಧಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಶಿವರಾಮ ಕಾರಂತಕನ್ನಡಕನ್ನಡ ಅಕ್ಷರಮಾಲೆಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕಉಗ್ರಾಣಬೆಂಗಳೂರು ಕೋಟೆಮಾಗಡಿವಿನಾಯಕ ಕೃಷ್ಣ ಗೋಕಾಕಯು.ಆರ್.ಅನಂತಮೂರ್ತಿಭಾರತದ ಸಂವಿಧಾನಎ.ಪಿ.ಜೆ.ಅಬ್ದುಲ್ ಕಲಾಂವಿಜಯನಗರ ಸಾಮ್ರಾಜ್ಯಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಚಂದ್ರಶೇಖರ ಕಂಬಾರಭಾರತದ ರಾಷ್ಟ್ರಪತಿಗಳ ಪಟ್ಟಿಮಾದಕ ವ್ಯಸನಭಾರತದಲ್ಲಿ ತುರ್ತು ಪರಿಸ್ಥಿತಿಸಂಕಷ್ಟ ಚತುರ್ಥಿಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕನ್ನಡ ಸಾಹಿತ್ಯಗಿರೀಶ್ ಕಾರ್ನಾಡ್ವಚನ ಸಾಹಿತ್ಯಶ್ರೀಗಂಧದ ಮರಬೆಂಗಳೂರು